ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

  1.             Darshan Sudeep's good news

ವಿಷ್ಣು ದಾದ ಹಾಗೂ ಅಂಬರೀಶ್ ಬಿಟ್ಟರೆ ಗೆಳೆತನದಲ್ಲಿ ಮತ್ತೆ ನೆನಪಾಗೋದು ಇವರಿಬ್ಬರೆ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ದೋಸ್ತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ....


ಅದರಲ್ಲೂ ಮುನಿಸಿಕೊಂಡು ಬೇರೆ ಬೇರೆ ಆದಾಗ




 ಇಬ್ಬರ ಅಭಿಮಾನಿಗಳು ಕಣ್ಣೀರು ಹಕ್ಕಿದ್ದು ಇದೆ , ಆದರೆ ಗಟ್ಟಿ ಆಗಿದ್ದ ಗೆಳೆತನದಲ್ಲಿ ಧಿಡಿರಣೆ ಬಿರುಕು ಕಾಣಿಸಿದ್ದೇಕೆ ?
ಇಬ್ಬರ ಮುನಿಸಿಗೆ ಅಸಲಿ ಕಾರಣವೇನು ಅನ್ನೋದನ್ನು ಇಬ್ಬರು ಬಿಟ್ಟು ಕೊಟ್ಟಿಲ್ಲ..



ವಿಷಯ ಹೀಗಿದ್ದರು ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರ ನಡುವಿನ ಗೆಳೆತನ ಹಳಸಿದೆ ಅನ್ನೋದು ಗೊತ್ತಾಗೋಕ್ಕೆ ಹೆಚ್ಚು ಸಮಯ ಹಿಡಿದಿರಲಿಲ್ಲ...


ಆದರಲ್ಲೂ ಸ್ವತಃ ದರ್ಶನ್ tweeter ಮೂಲಕ 
"ಇನ್ಮುಂದೆ ನಾವಿಬ್ಬರೂ ಸ್ನೇಹಿತರಲ್ಲ" 
ಅಂತ ಹೇಳಿದ್ಮೇಲೇ ಈ ಕುಚಿಕು ಗೆಳೆಯರು ಇನ್ಮುಂದೆ ಒಂದಾಗೋದಿಲ್ಲ ಅನ್ನೋದು confirm ಆಗಿತ್ತು...


ಕಿಚ್ಚ ಹಾಗೂ ದಚ್ಚು ಅಭಿಮಾನಿಗಳಲ್ಲಿ ಈ ಇಬ್ಬರು ಮತ್ತೆ ಒಂದಾಗುತ್ತಾರೆ ಅಂತ ನಂಬಿಕೆ ಉಳಿದಿಲ್ಲ , ಇಬ್ಬರನ್ನು ಒಂದೇ ಸಿನಿಮಾದಲ್ಲಿ ಮತ್ತೆ ನೋಡಬಹುದು ಅನ್ನೋದು ಆಸೆನು ಕಮರಿ ಹೋಗಿದೆ...



ಈ ಗ್ಯಾಪ್ ನಲ್ಲಿ ಸ್ಯಾಂಡಲ್ವುಡ್ ನಲ್ಲಿ ಸುದ್ದಿ ಒಂದು ಓಡಾಡೋಕೆ ಶುರುವಾಗಿದೆ...

ಈ ಸುದ್ದಿ ಇಬ್ಬರ ಅಭಿಮಾನಿಗಳಿಗೂ ಅಚ್ಚರಿ ಹುಟ್ಟಿಸದೇ ಇರೋದಿಲ್ಲ...

ಕಿಚ್ಚ ಸುದೀಪ್ ದರ್ಶನ್ ದರ್ಶನ್ ಮುನಿಸು ಅಂತ್ಯ ?

ಕಿಚ್ಚನ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುನಿಸಿಕೊಂಡಿದು ಗೊತ್ತೇ ಇದೆ ಆದರೆ ಈ ಜನ್ಮದಲ್ಲಿ ಇಬ್ಬರು ಮತ್ತೆ ಒಂದಾಗಬಹುದು ಅನ್ನೋ ನಂಬಿಕೆ ಉಳಿದಿರಲಿಲ್ಲ...

ಆದರೆ ಇಬ್ಬರ ಮುನಿಸಿಗು ಮುಲಾಮು ಹಚ್ಚಿ ಸರಿಪಡಿಸಲಾಗಿದೆ ಅನ್ನೋ ಸುದ್ದಿ ಓಡಾಡುತಿದೆ..
ಸಾಧ್ಯದಲ್ಲಿ ಇಬ್ಬರು ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ...

ದಿಗ್ಗಜರ ಸಮ್ಮುಖದಲ್ಲಿ ಮತ್ತೆ ದೋಸ್ತಿ...

ಬರೋಬ್ಬರಿ ಹತ್ತು ವರ್ಷಗಳ ಬಳಿಕ ರೆಬೆಲ್ ಸ್ಟಾರ್ ಅಂಬರೀಶ್ ಮತ್ತೆ ನಾಯಕ ನಟನಾಗಿ ನಟಿಸಿರೋ ಸಿನಿಮಾ 'ಅಂಬಿ ನಿಂಗ್ ವಾಯಸಯ್ತೋ...
ಈ ಚಿತ್ರದ ಆಡಿಯೋ ರಿಲೀಸ್ ಗಾಗಿ ದೊಡ್ಡದೊಂದು ವೇದಿಕೆ ರೆಡಿಯಾಗುತಿದೆ...


ಈ ವೇದಿಕೆಯಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳ ಉಪಸ್ಥಿ ಇರುತ್ತೆ..

ಇವರ ಸಮ್ಮುಖದಲ್ಲಿ ಸುದೀಪ್ ಹಾಗೂ ದರ್ಶನ್ ಒಂದಾಗುತ್ತಾರೆ ಎನ್ನಲಾಗುತ್ತಿದೆ...


ಅಂಬಿ ಜೊತೆ ರಜನಿಕಾಂತ್,ಚಿರಂಜೀವಿ...


"ಅಂಬಿ ನಿಂಗ್ ವಯಸಯ್ತೋ" ಆಡಿಯೋ ರಿಲೀಸ್ ಗೆ ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ,ಧನುಷ್ ಸೇರಿದಂತೆ ಅನೇಕ ಗಣ್ಯರು ಭಾಗವಯಸಲ್ಲಿದ್ದಾರೆ...

ಹೀಗಾಗಿ ಇಂಥದ್ದೊಂದು ದೊಡ್ಡ ವೇದಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೂ ಆಹ್ವಾನ ನಿಡಲಿದೆ ಅಂಬಿ ಕಾರ್ಯಕ್ರಮವನ್ನ ತಪ್ಪಿಸಿಕೊಳ್ಳುವ ಮಾತೇ ಇಲ್ಲ..
ಹೀಗಾಗಿ ಈ ದೊಡ್ಡ ಸಮಾರಂಭದಲ್ಲಿ  ಕಿಚ್ಚ ಹಾಗೂ ದಚ್ಚು ವೇದಿಕೆ ಹಂಚಿಕೊಳ್ಳತಾರೆ ಅನ್ನೋ ಮಾತು ಕೇಳಿ ಬರುತ್ತಿದೆ...
ಇದೆ ವೇದಿಕೆಯಲ್ಲಿ ಕನ್ನಡದ ಎಲ್ಲ ಸೂಪರ್ ಸ್ಟಾರ್ ಗಳು ಇರ್ತಾರೆ,, ಪವರ್ ಸ್ಟಾರ್ ಪುನೀತ್ ರಾಜಕುಮಾರ್,ಶಿವರಾಜ್ ಕುಮಾರ್,ಯಶ್, ಉಪೇಂದ್ರ ,ಪ್ರೇಮ್, ಗಣೇಶ್ ದುನಿಯಾ ವಿಜಯ್ ಸೇರಿದಂತೆ ಇನ್ನು ಅನೇಕ ಗಣ್ಯರ ಉಪಸ್ಥಿತಿ ಇರುತ್ತೆ..
,,,,,

ಹೀಗಾಗಿ ಇವರೆಲ್ಲರ ಸಮ್ಮುಖದಲ್ಲಿ ಬಹಳ ದಿನಗಳ ಬಳಿಕ ಸುದೀಪ್ ಹಾಗೂ ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತಗಳಿವೆ...

ದೋಸ್ತಿಗಳಾಗಿಯೇ ಇದಿದ್ದರೆ ಆಗುತಿತ್ತು ಈ ಸಿನಿಮಾ...




ಒಂದುವೇಳೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರು ದೋಸ್ತಿಗಳಾಗಿ ಇದ್ದಿದ್ದರೆ ಜೊತೆಯಾಗಿಯೇ ಒಂದು ಸಿನಿಮಾ ಮಾಡೋಕೆ ಸ್ಕೆಚ್ ಹಾಕಿದ್ದರು, "ತಮಿಳನಲ್ಲಿ ಮಾಧವನ್ ಹಾಗೂ ವಿಜಯ್ ಸೇತುಪತಿ ನಟಿಸಿದ್ದ ವಿಕ್ರಮ್ ವೇದ ಕನ್ನಡದಲ್ಲಿ ರಿಮೇಕ್ ಆಗುತಿತ್ತು"...
ಅಷ್ಟರಲ್ಲೆ ಗೆಳೆಯರೊಬ್ಬರು ಮುನಿಸಿಕೊಂಡಿದಕ್ಕೆ ಸಿನಿಮಾ ಕೈಬಿಡಲಾಗಿತ್ತು...


,,,,,,,,,,,,,,,


Sandalwood ನಲ್ಲಿ ಸುದೀಪ್ ದರ್ಶನ್ ಒಂದಾಗ್ತಾರೆ ಅನ್ನೋ ಸುದ್ದಿ ಏನೋ ಓಡಾಡುತಿದೆ..
ಆದರೆ ಇಬ್ಬರು ಅಧಿಕೃತವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ..
ಹೀಗಾಗಿ ಇದು ಕೇವಲ ಗಾಳಿ ಸುದ್ದಿನ ? ಇಲ್ಲ ನಿಜನ ? ಅನ್ನೋದು ಆಗಸ್ಟ್ 10ಕ್ಕೆ ನೆನೆಡೆಯಲಿರೋ ಅಂಬಿ ಆಡಿಯೋ ರಿಲೀಸ್ ನಲ್ಲಿ ಗೊತ್ತಾಗುತೆ..
ಹಾಗೇನಾದ್ರು ಗೆಳೆಯರು ಒಂದಾದ್ರೆ ವಿಕ್ರಮ್ ವೇದ  ನೋಡೋ ಭಾಗ್ಯ ಇಬ್ಬರಿಗೂ ಸಿಕ್ಕರು ಅಚ್ಚರಿ ಪಡಬೇಕಿಲ್ಲ...

Comments

Popular posts from this blog

ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ