ದುನಿಯಾ ವಿಜಯ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಂದ 600ಕಿಲೋಮೀಟರ್ ಇಂದ ಪಾದಯಾತ್ರೆ ,ನಿಜಕ್ಕೂ ಗ್ರೇಟ್ ಅಭಿಮಾನಿಗಳು...

ಅಭಿಮಾನಿಗಳು ಅಂದರೆ ಹೇಗೆ? ತಮ್ಮ ಹೀರೊನ ಫೋಟೋ ಗಾಡಿಗಳ ಮೇಲೆ ,ಮನೇಲಿ, ಮೊಬೈಲ್ ವಾಲ್ಪೇಪರ್, ಫೇಸ್ಬುಕ್ ನಲ್ಲಿ ಡಿಪಿ ಹಾಕ್ತಿರ್ತಾರೆ, ಹಾಗೆ ಹೊಸ ಫಿಲ್ಮ್ ಬಂದರೆ ಹಾಲಿನ ಅಭಿಷೇಕ ಮಾಡಿ ತಮ್ಮ ಹೀರೊ ಫಿಲ್ಮ್ ಹಿಟ್ ಆಗಲಿ ಎಂದು ದೇವರಲ್ಲಿ ಪೂಜಿಸುತ್ತಾರೆ, ಫಿಲ್ಮ್ ನೋಡಿ ಸಂಭ್ರಮಿಸುತ್ತಾರೆ, ಅಷ್ಟೇ ಅಲ್ಲದೆ ಕೆಲವೊಮ್ಮೆ ಅವರ ನೆಚ್ಚಿನ ಹೀರೊ, ಶೂಟಿಂಗ್ ಟೈಮಲ್ಲಿ ಅಥವಾ ಹೊರಗಡೆ ಕಂಡರೆ ಅವರ ಜೊತೆ ಒಂದು ಸೆಲ್ಫಿ ತೆಗೆದು ಖುಷಿ ಪಡುತ್ತಾರೆ, ತಮ್ಮ ನೆಚ್ಚಿನ ಹೀರೊ ಗೆ ನೋಡಲೇ ಬೇಕು ಅಂತ ಇದ್ದರೆ ಸುಮಾರು  ಅಭಿಮಾನಿಗಳು ಸ್ಟಾರ್ ನಟರ ಮನೆಗೆ ಹೋಗಿ ಅವರಿಗೆ ನೋಡಿ ಸೆಲ್ಫಿ ತೆಗೀತಾರೆ,,
ತಮ್ಮ ನೆಚ್ಚಿನ ಹೀರೊ ಬರ್ಥಡೆ ಇದ್ದರೆ ಎನ್ ಮಾಡ್ತಾರೆ??
ತಮ್ಮ ನೆಚ್ಚಿನ ನಟರ ಬರ್ಥಡೆ ಗೆ ಅವರವರ ಸಂಘಗಳು ಅವರವರ ಊರಲ್ಲಿ , ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿ, ಕೇಕ್ ಕತ್ತರಿಸುವ ಮೂಲಕ ತಮ್ಮ ಬಾಸ್ ಗೆ ಜನ್ಮದಿನದ ಶುಭಾಶಯಗಳು ತಿಳಿಸುತ್ತಾರೆ, ಇಂಕೆಲವರು ಹೀರೋಗಳ ಮನೆ ಮುಂದೆ ರಾತ್ರಿ 12 ಗಂಟೆಯಿಂದನೆ ಹುಟ್ಟುಹಬ್ಬದ ಶುಭಾಶಯಗಳು ತಿಳಿಸೋಕ್ಕೆ ಬಿಡ್ ಬಿಟ್ಟುಕೊಂಡಿರ್ತಾರೆ,
ನೆಚ್ಚಿನ ನಟರಗೋಸ್ಕರ ಕೇಕ್ ತರಿಸಿಕೊಂಡು ಕೇಕ್ ಮೇಲೆ ಹೆಸರು ಹಾಕಿ ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಾರೆ , ನೆಚ್ಚಿನ ನಟರ  ಬರ್ಥಡೆ ಅಂದರೆ ಅಭಿಮಾನಿಗಳಿಗೆ ಹಬ್ಬ ಇದ್ದಂಗೆನೆ ಬಿಡಿ..ಆದರೆ ನಾವು ಹೇಳುತ್ತಿರುವ ಅಭಿಮಾನಿಗಳ ಬಾಗ್ಗೆ ನಿಮಗೆ ಗೊತ್ತಾದರೆ ನೀವು ನಿಜಕ್ಕಿ ಶಾಕ್ ಆಗ್ತಿರ ,
ನಟ ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಇಲ್ಲಿ ಇಬ್ಬರು ದುನಿಯಾ ವಿಜಯ್ ಅಭಿಮಾನಿಗಳು ( ಉತ್ತರ ಕರ್ನಾಟಕದ) ಯದಗಿರಿ ಪಟ್ಟಣದಿಂದ ಬೆಂಗಳೂರಿನ ದುನಿಯಾ ವಿಜಯ್ ನಿವಾಸದವರೆಗೆ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ, "ವಿಜಯ ಪೂಜಾರಿ ಮತ್ತು ಹುಸೇನ್ ದುನಿಯಾ" ಇದು ಅವರಿಬ್ಬರ ಹೆಸರು ಈ ಅಭಿಮಾನಿಗಳು ಯಾವ ಥರ ಅಂದರೆ ಅಭಿಮಾನಕ್ಕು ಮೀರಿದ ಅಭಿಮಾನಿಗಳು ಎಂದರು ತಪ್ಪಾಗಲಾರದು..
ಯಾಕಂದ್ರೆ ಸುಮಾರು 600 ಕಿಲೋಮೀಟರ್ ಇಂದ ಪಾದಯಾತ್ರೆ ಮೂಲಕ ವಿಜಯ್ ಮತ್ತು ಹುಸೇನ್ ದುನಿಯಾ ವಿಜಿ ಹುಟ್ಟುಹಬ್ಬಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ,
ಈಗಾಗಲೇ ಇವರಿಬ್ಬರೂ ತಮ್ಮ ಯಾತ್ರೆ ಕೈಗೊಂಡು ದಾರಿ ಯಲ್ಲಿ ಇದ್ದಾರೆ ಇವರಿಗೆ ಸುಮಾರು ದಿನಕ್ಕೆ 30 ಕಿಲೋಮೀಟರ್ ನೆಡೆಯಬೇಕಾಗಿದೆ ಯಾಕಂದರೆ ಇದೆ ತಿಂಗಳಲ್ಲಿ 20 ಕೆ ದುನಿಯಾ ವಿಜಿಹುಟ್ಟು ಹಬ್ಬ ಇದೆ...

ಆದರೆ ಇದೇ ವಿಷಯಕ್ಕೆ ದುನಿಯಾ ವಿಜಯ್ ಮಾತ್ರ ಬೇಸರಗೊಂಡಿದ್ದಾರೆ,,
ಯಾಕೆ ಅಂತ ಸ್ವತಃ ದುನಿಯಾ ವಿಜಯ್ ಹೇಳಿರುವ ಮಾತುಗಳು ಓದಿ...👇

"ಸಿನಿಮಾ ಹೀರೋಗಳಲ್ಲಿ ಒಳ್ಳೇತನಾನ ಮಾತ್ರವೇ ಕಾಣೋರು ಈ ಅಭಿಮಾನಿಗಳು. ಅಷ್ಟಲ್ಲದೇ ಅವರನ್ನ 'ಅಭಿಮಾನಿ ದೇವ್ರು' ಅಂತ ಕರೀತಿದ್ರ ಅಣ್ಣಾವ್ರು? ಆದರೆ ಈ ಅಭಿಮಾನಿಗಳು ಮಾತ್ರ ನನ್ನಂಥೋರನ್ನೇ ದೇವ್ರನ್ನಾಗಿ ಮಾಡಿ ಮುಜುಗರ ಕೊಡುತ್ತಿದ್ದಾರೆ. ನಾನು ಹೀಗೆ ಹೇಳೋಕೆ ಕಾರಣ, ನನಗೋಸ್ಕರ ಪಾದಯಾತ್ರೆ ನಡೆಸಿರೋ ಈ ಇಬ್ಬರು ಅಭಿಮಾನಿಗಳು! ಅಭಿಮಾನ ನನಗೂ ಇಷ್ಟಾನೇ. ನನ್ನ ಬರ್ತ್ ಡೇ ದಿನ ನಿಮ್ಮನ್ನೆಲ್ಲ ನೋಡೋದು ಅಂದರೆ ತುಂಬಾನೇ ಇಷ್ಟ. ಆದರೆ ಹಾಗಂತ ಅದಕ್ಕೆ ಹೀಗೆ ಪಾದಯಾತ್ರೆ ಮಾಡ್ಕೊಂಡು ಕಷ್ಟಪಟ್ಟು ಬರೋದು ನೋಡಿದ್ರೆ ನೋವಾಗುತ್ತೆ. ಯಾಕೆಂದರೆ ದಿನಾ ಮೂವತ್ತು ಕಿಲೋ‌ಮೀಟರ್ ನಡೆದು ಬರೋದು ಅಂದರೆ ಎಷ್ಟು ಕಷ್ಟ ಅಂತ ನನಗ್ಗೊತ್ತು. ಅಷ್ಟೇ ಅಲ್ಲ, ಈ ಕಾಲದಲ್ಲಿ ಒಂದೊಂದು ನಿಮಿಷಕ್ಕೂ ತುಂಬ ವ್ಯಾಲ್ಯೂ ಇದೆ. ಬೆಂಗಳೂರು ಬರೋದಕ್ಕೇ ತೆಗೆದುಕೊಳ್ಳೋ ದಿನಗಳಲ್ಲೇ ಬೇರೇನಾದರೂ ಒಳ್ಳೆಯ ಕೆಲಸ ಮಾಡಿದ್ರು ನನಗೆ ಖುಷೀನೇ. ಯಾಕೆಂದರೆ ವಿಜಯ ಪೂಜಾರಿ ಮತ್ತು ಹುಸೇನ್ ದುನಿಯಾ ಅವರು ಯಾದಗಿರಿಯಿಂದ ಹೊರಟು ಆ ಸುದ್ದಿ ಪತ್ರಿಕೇನಲ್ಲಿ ನೋಡಿದ್ಮೇಲೇನೇ ನನಗೆ ವಿಷಯ ಗೊತ್ತಾಗಿದ್ದು. ಮೊದಲೇ ಗೊತ್ತಾಗಿದ್ರೆ ನಡೆಯೋದೆಲ್ಲ ಬೇಡ ಅಂತಾನೇ ಹೇಳ್ತಿದ್ದೆ. ಸದ್ಯಕ್ಕೆ ಅವರಿಬ್ರು ಕ್ಷೇಮವಾಗಿ ಬೆಂಗಳೂರು ತಲುಪಲಿ ಅನ್ನೋದೇ ನನ್ನ ಹಾರೈಕೆ. ದಯವಿಟ್ಟು ಬೇರೆ ಯಾರೂ ಇಂಥ ಸಾಹಸಕ್ಕೆ ಕೈ ಹಾಕಬೇಡಿ ಅನ್ನೋದು ಕಳಕಳಿಯ ಪ್ರಾರ್ಥನೆ"...
ಇದು ದುನಿಯಾ ವಿಜಯ್ ಹೇಳಿರುವ ಮಾತುಗಳು,
ಈ ಸುದ್ದಿ ಈಗಾಗಲೇ ಸ್ಥಳೀಯ ಪತ್ರಿಕೆಗಳಲ್ಲಿ ಕೂಡ ಈ ಸೂಡಿ ಬಂದಿದ್ದೆ
ಈ ಕಾಲದಲ್ಲಿ ದೇವರಿಗೆ ಪಾದಯಾತ್ರೆ ಮಾಡೋಕೆ ಹಿಂದೇಟು ಹಾಕುತ್ತಿರುವ ಜನಗಳ ಮಧ್ಯೆಯಲ್ಲಿ , ಈ ಇಬ್ಬರು ಅಭಿಮಾನಿಗಳು ತಮ್ಮ ನೆಚ್ಚಿನ ನಟನಲ್ಲಿ ದೇವರು ಕಂಡಿದ್ದಾರೆ, ನಿಜಕ್ಕೂ ಇದು ಒಂದು ಅಪರೂಪದ ಸಂಗತಿ, ನಿಜಕ್ಕೂ ಇದು ಎಲ್ಲ ದುನಿಯಾ ವಿಜಿ ಅಭಿಮಾನಿಗಳು ಖುಷಿಪಡುವ ಸಂಗತಿನೆ, ನಿಜಕ್ಕೂ ಇವರು ಗ್ರೇಟ್ ಅಭಿಮಾನಿಗಳು ಅಂದರು ತಪ್ಪಾಗಲಾರದು...

Comments

Popular posts from this blog

ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ ಹೇಳಿಕೊಟ್ಟಿದ್ದಾರೆ

ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

Darshan Sudeep's good news