ಸಿಧಗಂಗಾ ಶ್ರೀಗಳು ಅಗಲಿದ ನಂತರ ಸ್ವಾಮಿಗಳು ತುಂಬಾ ಪ್ರೀತ್ಸೋ ಮುದ್ದಿನ ಶ್ವಾನ ಆಚಾರ್ಯ..

ನೀನಿಲ್ಲದ ಈ ಬದುಕು ಘೋರವೆಂದು ನಡೆದವನು ನಾಯಿಭೈರ
ತಾಯಿಯ ರುಣ ಬಿಟ್ಟರೆ ನಾಯಿಯ ರುಣ ಅಂತಾರಲ್ಲ ಹಾಗೆ ನನ್ನನ್ನು ಪೂಜ್ಯರ ಜೊತೆ ಬೆಸೆದದ್ದು ನಾಯಿಯ ರುಣವೆ. ಹಿರಿಯ ಸಂಶೋಧಕ ಡಾ॥

ಚಿದಾನಂದಮೂರ್ತಿಯವರು ನನ್ನನ್ನು ಪರಿಚಯಿಸಿ ಸ್ವಾಮೀಜಿಗೆ ಕೊಟ್ಟ ಪತ್ರ ಹಿಡಿದು ಮಠಕ್ಕೆ ಹೋದಾಗ  ಅಲ್ಲಿ ನಾನು ಕ್ಲಿಕ್ಕಿಸಿದ ಕೆಲ ಫೋಟೋಗಳಿವು . ಪೂಜ್ಯರ ಜೀವಕ್ಕೆ ಜೀವವಾಗಿದ್ದ  ಈ ನಾಯಿಯ ಹೆಸರು ಭೈರ . ಮಠದ ಕೆಲ ಭಕ್ತರಲ್ಲಿ  ಸಾಕ್ಷಾತ್ ಕಾಲಭೈರವನೇ ನಾಯಿಯಾಗಿ ಬಂದು ಸ್ವಾಮೀಜಿಗೆ ಕಾವಲಿದ್ದಾನೆಂದೂ ಆದು ಅವರ ಜೊತೆ ಇರುವುದರಿಂದಲೇ  ಭೂತ ಪ್ರೇತಾತ್ಮಗಳು ಇತ್ತ ಸುಳಿಯುತ್ತಿಲ್ಲವೆಂಬ ಪ್ರತೀತಿಯಿತ್ತು.  ನಾನು ಮಠಕ್ಕೆ ಹೋದಾಗಲೆಲ್ಲ ವಿಶೇಷವಾಗಿ ಅದನ್ನು ಮಾತಾಡಿಸಿ ಬರುತ್ತಿದ್ದೆ.

        ಅದೊಂದು ವಿಶಿಷ್ಟ ಬುಧ್ಧಿಮತ್ತೆಯ ನಾಟಿ ತಳಿಯ ನಾಯಿ. ಅದು ಮಠಕ್ಕೆ ಬಂದು ಸೇರಿಕೊಂಡ ಬಗ್ಗೆಯೇ ಥರೇವಾರಿ ಕತೆಗಳಿವೆ.ಈ ಪೈಕಿ ಒಂದು - ಬುಧ್ಧಿಯವರು ಯಾವುದೋ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವಾಗ ಮಾರ್ಗಮಧ್ಯೆ ಕುಡುಕರು ನಾಯಿ ಮರಿಯೊಂಧರ ಮೇಲೆ ಕಾರುಹತ್ತಿಸಿ ಅದರ ಒದ್ಥಾಟವನ್ನು ನೋಡಲಾರದೇ  ಮರುಗಿದ ಬುಧ್ದೀಯವರು ಅದನ್ನು ತಮ್ಮ ಮಡಿಲಲ್ಲಿಟ್ಟು ಮಠಕ್ಕೆ ತಂದರೆಂಬುದು. ಬುಧ್ಧಿಯವರು ತಮ್ಮ ಪೂಜೆ ಮುಗಿಸಿ ಮಠ ಸುತ್ತಲು ಹೊರಟಿದ್ದೇ ತಡ ಅವರ ನೆರಳಲ್ಲಿ ನೆರಳಾಗಿ ಹಿಂಬಾಲಿಸುತ್ತಿತ್ತು. ಕುಂಟುತ್ತಲೇ ನಡೆಯುತ್ತಿತ್ತು.
ಯಾವುದೇ ಕೊಠಡಿ ಹೂಕ್ಕರೂ ಅವರು ಹೊರಬರುವ ತನಕ ಕದಲುತ್ತಿರಲಿಲ್ಲ. ಪ್ರತಿನಿತ್ಯ ಮಕ್ಕಳ ಊಟ ಕ್ಷೇಮ ಹೇಗೆ ವಿಚಾರಿಸುತ್ತಿದ್ದರೋ ಹಾಗೆಯೇ ಈ ಭೈರನ ಬಗ್ಗೆಯೂ ತಪ್ಪದೇ ಬುಧ್ಧಿಯವರ ಮಾತಿರುತ್ತಿತ್ತು. ಬುಧ್ಧಿಯವಗೆ ವಯಸ್ಸಾದಂತೆಯೇ ಇದಕ್ಕೂ ಮುಪ್ಪಾಗಿ ತೀರ ಇತ್ತೀಚಿಗೆ ಸ್ವಾಮಿ ಇನ್ನೇನು ಹಾಸಿಗೆ ಹಿಡಿದೇ ಬಿಟ್ಟರಲ್ಲˌಭೈರ ಬುಧ್ಧಿಯವರನ್ನು ಕಾಣದೇ ಅಳುತ್ತಾ ಊಳಿಡಲಾರಂಭಿಸಿತು. ಆಸ್ಪತ್ರೆಯಲ್ಲಿದ್ದಾಗಲೂ ಬುಧ್ಧಿ ಭೈರನ ಬಗ್ಗೆ ಕಿರಿಯ ಶ್ರೀಗಳಲ್ಲಿ ವಿಚಾರಿಸುತ್ತಿದ್ದರಂತೆ. ಆಸ್ಪತ್ರೆಯಿಂದ ಮತ್ತೆ ಮಠಕ್ಕೆ ತಂದಾಗ ಅವರನ್ನು ಕಾಣದ ದುಃಖಕ್ಕೆ ಬಿದ್ದ ಭೈರ ಬುಧ್ಧಿಯವರ ದೇಹಾಂತ್ಯಕ್ಕೂ ಮೂರು ದಿನದಿಂದಲೇ ನೀರು ಆಹಾರ ತ್ಯಜಿಸಿದನಂತೆ. ನಾನು ಬುಧ್ಧಿಯವರ ಆರೋಗ್ಯ ವಿಚಾರಿಸಿ ಮಠಕ್ಕೆ ಫೋನ್ ಮಾಡಿದಾಗೆಲ್ಲ ಈ ನಾಯಿಯ ಬಗ್ಗೆಯೂ ವಿಚಾರಿಸುತ್ತಿದ್ದೆ. ಒಂದೆಡೆ ಬುಧ್ಧಿಯವರ ಅಗಲಿಕೆಯ ನೋವು ಮತ್ತೊಂದೆಡೆ ಈ ಭೈರನ ಗತಿಯೇನೆಂದು ಇವತ್ತು ಕೇಳ ಹೊರಟರೆ ಅತ್ತಲಿಂದ ಬಂದ ಮಾಹಿತಿ ನನ್ನ ಎದೆಬಾರ ಮತಷ್ಟು ಹೆಚ್ಚಿಸಿ ಕಣ್ಣು ಮಂಜಾಗಿಸಿತು. ಕಳೆದ ಮೂರು ದಿನಗಳಿಂದ ಅನ್ನ ನೀರು ತ್ಯಜಿಸಿ ರೋಧಿಸುತ್ತಾ ಮಲಗಿದ್ದ ಭೈರ ನಿನ್ನೆ ರಾತ್ರಿಯಿಂದ ಕಾಣಿಸುತ್ತಿಲ್ಲ !

   ' ಬಹುಷಃ ಇನ್ನೆಂದಿಗೂ ಅವನು ನಿಮ್ಮ ಕಣ್ಣಿಗೆ ಕಾಣಿಸಲಾರ ' ಎಂದಿದ್ದೇ ಇತ್ತಲಿಂದ ನಾನೂ ಫೋನ್ ಇಟ್ಟುಬಿಟ್ಟೆ. ಸಾಮಾನ್ಯವಾಗಿ ನಾಯಿಗಳು ತಮ್ಮ ಸಾವು ಸಮೀಪಿಸುತ್ತಿದ್ದ ಹಾಗೆಯೇ ಅಜ್ಞಾತವಾಗಿ ಕಣ್ಮರೆಯಾಗುತ್ತವೆ. ಪೂಜ್ಯರೇ ಇಲ್ಲವೆಂದ ಮೇಲೆ ಈ ಲೋಕದ ಹಂಗೇಕೆಂದು ನಾಯಿ ಭೈರನೂ ಅವರೊಂದಿಗೆ ನಡೆದು ಬಿಟ್ಟನೆ ?
  ಲೋಕವೆಲ್ಲ ಪುಜ್ಯರ ಫಾರ್ಥೀವವನ್ನು ಸುತ್ತುತ್ತಿದ್ದರೆ ನನ್ನ ಮನಸ್ಸೇಕೋ ಅವರನ್ನೇ ತನ್ನ ಉಸಿರಾಗಿ ಬದುಕಿದ್ದ ˌಅವರ ಜೊತೆಗೇ ಸದ್ದಿಲ್ಲದೇ ನಡೆದು ಹೋದ ಆ ಜೀವಾತ್ಮಕ್ಕಾಗಿ ಮಿಡಿಯುತ್ತಿದೆ.

Comments

Popular posts from this blog

ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ ಹೇಳಿಕೊಟ್ಟಿದ್ದಾರೆ

ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

Darshan Sudeep's good news